Publish Date: Thu, 04 Mar 2021 (09:46 IST)
Updated Date: Thu, 04 Mar 2021 (09:47 IST)
ಹೈದರಾಬಾದ್ : ಜೈಲಿನಲ್ಲಿದ್ದ ಪ್ರೇಮಿಯೊಬ್ಬ 29 ವರ್ಷದ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಯೊಬ್ಬಳಿಗೆ ಇರಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮಹಿಳೆಗೆ 2 ವರ್ಷಗಳಿಂದ ಪರಿಚಿತನಾಗಿದ್ದ ಆರೋಪಿ ತನ್ನನ್ನು ಲವ್ ಮಾಡುವಂತೆ ಒತ್ತಾಯಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಮಹಿಳೆ ದೂರು ನೀಡಿದ್ದ ಹಿನ್ನಲೆಯಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಳು. ಇದರಿಂದ ಆತ ಜೈಲಿನಲ್ಲಿದ್ದ. ಆದರೆ ಜೈಲಿನಿಂದ ತಪ್ಪಿಸಿಕೊಂಡು ಬಂದು ಮಹಿಳೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.