Publish Date: Sat, 19 Dec 2020 (09:55 IST)
Updated Date: Sat, 19 Dec 2020 (09:56 IST)
ಪಿಲಿಭಿತ್ : ಮಹಿಳೆಯೊಬ್ಬಳ ಮೇಲೆ 21 ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಅವಳನ್ನು ಕೊಲೆ ಮಾಡಿ ಆಕೆಯ ಒಡವೆಗಳನ್ನು ದೋಚಿದ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ಮಹಿಳೆ ಕಾಲೇಜಿನಲ್ಲಿ ಓದುತ್ತಿದ್ದಾಗ ಆರೋಪಿ ಗುಮಾಸ್ತ ಆಕೆಗೆ ಪರಿಚಯವಾಗಿ ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಆದರೆ ಆರೋಪಿ ಮಹಿಳೆಯ ಆಕ್ಷೇಪಾರ್ಹ ಫೋಟೊಗಳನ್ನು ತೆಗೆದುಕೊಂಡ ಕಾರಣ ಮಹಿಳೆ ಆತನಿಂದ ದೂರವಾಗಿ ಬೇರೆಯೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ಫೋಟೊಗಳನ್ನು ಮಹಿಳೆ ಪತಿಗೆ ನೀಡಿ ಡಿವೋರ್ಸ್ ನೀಡುವಂತೆ ಮಾಡಿದ್ದಾನೆ. ಬಳಿಕ ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ಇಬ್ಬರು ಗೆಳೆಯರೊಂದಿಗೆ ಮನೆಗೆ ನುಗ್ಗಿದ ಆತ ಮಹಿಳೆಯ ಮೇಲೆ ಮಾನಭಂಗ ಎಸಗಿ ಕೊಲೆ ಮಾಡಿ ಆಕೆಯ ಒಡವೆಗಳನ್ನು ದೋಜಿಕೊಂಡು ಹೋಗಿದ್ದಾನೆ.
ಈ ಬಗ್ಗೆ ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.