Select Your Language

Notifications

webdunia
webdunia
webdunia
webdunia

ವೇಶ್ಯೆಯೆಂದು ಜರಿದ ಬಿಜೆಪಿ ಮುಖಂಡನ ಬಂಧನಕ್ಕೆ ಮಾಯಾವತಿ ಒತ್ತಾಯ

ಮಾಯಾವತಿ
ನವದೆಹಲಿ , ಬುಧವಾರ, 20 ಜುಲೈ 2016 (19:48 IST)
ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ತಮ್ಮನ್ನು ವೇಶ್ಯೆಗಿಂತಲೂ ಕೀಳು ಎಂದು ಕರೆದಿದ್ದರಿಂದ ಆಕ್ರೋಶಗೊಂಡ ಮಾಯಾವತಿ, ಕೂಡಲೇ ದಯಶಂಕರ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ, ಪಕ್ಷದ ಮುಖಂಡ ದಯಾಶಂಕರ್ ಸಿಂಗ್ ಹೇಳಿಕೆಗೆ ವಿಷಾದಿಸುವುದಾಗಿ ಹೇಳಿದ್ದಾರೆ.
 
ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್, ಯಾವುದೇ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಟಿಕೆಟ್ ವಿತರಣೆ ಸಂದರ್ಭ ಬಂದಾಗ, ಮಾಯಾವತಿ ನಡತೆ ವೇಶ್ಯೆಗಿಂತಲೂ ತುಂಬಾ ಕೆಟ್ಟದಾಗಿರುತ್ತದೆ ಎಂದು ಕಿಡಿಕಾರಿದ್ದರು.
 
ದಯಾಶಂಕರ್ ಸಿಂಗ್ ಹೇಳಿಕೆಯಿಂದ ಆಘಾತಗೊಂಡ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ 
 
ದಯಾಶಂಕರ್ ಸಿಂಗ್ ಹೇಳಿಕೆ ಒಪ್ಪುವಂತಹದಲ್ಲ. ಆದ್ದರಿಂದ, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾಗೊಳಿಸಲಾಗಿದೆ ಎಂದು ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಮಾಯಾವತಿ ವೇಶ್ಯೆಗಿಂತಲೂ ಕೀಳು: ಬಿಜೆಪಿ ಮುಖಂಡ