ನವದೆಹಲಿ : ನೀವು ಸರಿಯಾಗಿ ಮಾಸ್ಕ್ ಧರಿಸಿದರೆ ನಾವು ಲಾಕ್ಡೌನ್ ಮಾಡುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನರಿಗೆ ಎಚ್ಚರಿಸಿದರು.
ಲಾಕ್ಡೌನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ -19 ಪ್ರಕರಣ ನಗರದಲ್ಲಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ.
ಸದ್ಯಕ್ಕೆ ಲಾಕ್ಡೌನ್ ಹೇರುವ ಯಾವುದೇ ಯೋಜನೆಯನ್ನು ತಮ್ಮ ಸರ್ಕಾರ ಹೊಂದಿಲ್ಲ. ಆದರೆ ಜನರು ಸರಿಯಾಗಿ ಮಾಸ್ಕ್ ಧರಿಸಿ ಅವರ ಸುರಕ್ಷತೆಯಲ್ಲಿ ಅವರು ಇದ್ದರೆ ನಾವು ಲಾಕ್ಡೌನ್ ಮಾಡುವುದಿಲ್ಲ ಎಂದು ಹೇಳಿದರು.
ಲಸಿಕೆ ತೆಗೆದುಕೊಂಡರೆ ಸೋಂಕು ಬರುವುದಿಲ್ಲ ಎಂದು ಅರ್ಥವಲ್ಲ. ಲಸಿಕೆ ತೆಗೆದುಕೊಳ್ಳುವುದರಿಂದ ನಿಮ್ಮ ಜೀವಕ್ಕೆ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿನಂತಿಸಿಕೊಂಡರು.