ತಿರುವನಂತರಪುರಂ: ಪ್ರವಾಹ, ಪ್ರಾಕೃತಿಕ ವಿಕೋಪಗಳು ಬಂದರೆ ಮನುಷ್ಯ ಜಾತಿ-ಧರ್ಮ ಮರೆತು ನೆರವಾಗಬೇಕು ಎಂಬುದನ್ನು ಈ ಮಸೀದಿ ಸಾಬೀತುಪಡಿಸಿದೆ.
ಕೇರಳದಲ್ಲಿ ಭಾರೀ ಪ್ರವಾಹದಿಂದಾಗಿ ಹಲವಾರು ಕುಟುಂಬಗಳು ಸೂರು ಕಳೆದುಕೊಂಡವು. ಅಂತಹದ್ದೇ ಪ್ರಕರಣವೊಂದರಲ್ಲಿ ಮಲಪ್ಪುರದ ಮಸೀದಿಯೊಂದು ಮಾನವೀಯತೆ ಮೆರೆದಿದೆ.
ಪ್ರವಾಹದ ಹಿನ್ನಲೆಯಲ್ಲಿ ಈ ಮಸೀದಿ ಹಲವಾರು ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಕೇವಲ ಧರ್ಮದ ಬಗ್ಗೆ ಚಿಂತೆ ಮಾಡದೇ ಈ ಮಸೀದಿ ಸುಮಾರು 17 ಹಿಂದೂ ಧರ್ಮದ ಕುಟುಂಬದವರಿಗೆ ತನ್ನಲ್ಲಿ ಆಶ್ರಯ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ಸುಮಾರು 26 ಕ್ಕೂ ಹೆಚ್ಚು ಕುಟುಂಬದವರು ಆಶ್ರಯ ಪಡೆದಿದ್ದು, ಹೆಚ್ಚಿನವರು ಹಿಂದೂಗಳು ಎನ್ನುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.