ಬೆಂಗಳೂರು: ಪತಿಯ ಆಸೆಯನ್ನು ಈಡೇರಿಸಲು ಪತ್ನಿ ಎಂತಹ ಸಾಹಸ ಕೆಲಸಕ್ಕೆ ಕೈ ಹಾಕುತ್ತಾರೆ ಎಂಬುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಆದರೆ ಇಲ್ಲೊಬ್ಬ ಮುಸ್ಲಿಂ ಪತಿ ತನ್ನ ಹಿಂದೂ ಪತ್ನಿಯ ಕೊನೆ ಆಸೆ ಈಡೇರಿಸಲು ಹೋರಾಟವನ್ನೇ ನಡೆಸುತ್ತಿದ್ದಾನೆ.
ಹಿಂದು ಯುವತಿ ನಿವೇದಿತಾ ಎಂಬಾಕೆ ಮುಸ್ಲಿಂ ಯುವಕ ರಹಮಾನ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ನಿವೇದಿತಾ ಸಾವನ್ನಪ್ಪಿದ್ದು, ಆಕೆಯ ಅಂತ್ಯ ಸಂಸ್ಕಾರವನ್ನು ಕುಟುಂಬ ಬೋಧ್ ಘಾಟ್ ನಲ್ಲಿ ನೆರವೇರಿಸಿದೆ. ಆದರೆ ಆಕೆಯ ಶ್ರಾದ್ಧ ಮಾಡಲು ನಿವೇದಿತಾ ಕುಟುಂಬಕ್ಕೆ ದೇವಸ್ಥಾನವೊಂದರ ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ.
ಹೌದು. ಚಿತರಂಜನ್ ಪಾರ್ಕ್ ನ ಕಾಳಿ ಮಂದಿರದಲ್ಲಿ ಶ್ರಾದ್ಧ ಮಾಡಲು ಕುಟುಂಬ ಮುಂದಾಗಿತ್ತು. ಇದಕ್ಕಾಗಿ 1300 ರೂಪಾಯಿ ಮುಂಗಡ ಹಣ ನೀಡಿತ್ತು. ಆಗಸ್ಟ್ 12ರಂದು ಶ್ರಾದ್ಧ ನಡೆಯಬೇಕಿತ್ತು. ಆದ್ರೆ ಬುಕ್ಕಿಂಗ್ ಆದ ಕೆಲವೇ ನಿಮಿಷಗಳಲ್ಲಿ ಕರೆ ಮಾಡಿದ ಆಡಳಿತ ಮಂಡಳಿ ಶ್ರಾದ್ಧ ಮಾಡಲು ಸಾಧ್ಯವಿಲ್ಲ. . ಹಣ ವಾಪಸ್ ಪಡೆಯುವಂತೆಯೂ ಹೇಳಿದೆ. ಇದಕ್ಕೆ ಕಾರಣ ಆಕೆ ಮುಸ್ಲಿಂ ಹುಡುಗನನ್ನು ವರಿಸಿದ್ದು.
ಈಗ ರೆಹಮಾನ್ ಕುಟುಂಬಕ್ಕೆ ಸಹಾಯ ಸಂಸ್ಥೆಯೊಂದರ ನೆರವು ಸಿಕ್ಕಿದೆ. ಅದ್ರ ಮೂಲಕ ಶ್ರಾದ್ಧ ಮಾಡಲು ನಿವೇದಿತಾ ಕುಟುಂಬ ಚಿಂತನೆ ನಡೆಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ