ಇತ್ತೀಚಿಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಯಾವುದೇ ತೊಂದರೆ ಇಲ್ಲ ಎಂದು ಗೋವಾದ ಆರೋಗ್ಯ ಮಂತ್ರಿಯಾಗಿರುವ ವಿಶ್ವಜಿತ್ ರಾನೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೋಹರ ಪರಿಕ್ಕರ್ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಗೋವಾದ ಮೆಡಿಕಲ್ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, 62 ವರ್ಷದವರಾಗಿರುವ ಪರಿಕ್ಕರ್ ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿದ್ದು ಫೆಬ್ರುವರಿ 22 ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದರು.
ಮತ್ತೆ ಮರಳಿ ಪರಿಕ್ಕರ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಇನ್ನೇದರೂ ತೊಂದರೆ ಆಗಿರಬಹುದಾ ಎನ್ನುವ ಮಾತು ಕೇಳಿಬರುತ್ತಿತ್ತು ಆದರೆ ಅದಕ್ಕೆಲ್ಲ ತೆರೆ ಎಳೆದಿರುವ ವಿಶ್ವಜಿತ್ ರಾಣೆ ಪರಿಕ್ಕರ್ ಗುಣಮುಖರಾಗಿದ್ದಾರೆ ಅವರಿಗೆ ಯಾವ ಸಮಸ್ಯೆಯು ಇಲ್ಲ ಅವರ ಆರೋಗ್ಯ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅವರು ನಿರ್ಜಲಿಕರಣ ಸಮಸ್ಯೆಯಿಂದ ತೊಂದರೆ ಆಗಿದ್ದು ಅದಕ್ಕಾಗಿ ಅವರನ್ನು GMCH ಗೆ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಅಲ್ಲದೇ ಈಗಾಗಲೇ ಅವರನ್ನು ತಜ್ಞ ವೈದ್ಯರು ಅವರನ್ನು ಪರಿಶೀಲಿಸಿದ್ದು, 121 ನೇ ವಾರ್ಡ್‌ನಲ್ಲಿ ಪರಿಕ್ಕರ್ ಇರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.