Publish Date: Wed, 01 Sep 2021 (09:20 IST)
Updated Date: Wed, 01 Sep 2021 (09:27 IST)
ನವದೆಹಲಿ: ನಾಲ್ಕು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಮಾಡಿದ ಆರೋಪಿಗೆ ಸಾರ್ವಜನಿಕರೇ ಗೂಸಾ ಕೊಟ್ಟು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.
25 ವರ್ಷದ ಆರೋಪಿ ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಸಿಹಿತಿನಿಸಿದ ಆಸೆ ತೋರಿಸಿ ಹತ್ತಿರ ಕರೆಸಿ ಮಾನಭಂಗ ಮಾಡಿದ್ದ.
ಈ ವಿಚಾರವನ್ನು ಬಾಲಕಿ ತನ್ನ ಮನೆಯವರಿಗೆ ತಿಳಿಸಿದ್ದಳು. ವಿಷಯ ತಿಳಿದ ಕುಟುಂಬಸ್ಥರು ಮತ್ತು ನೆರೆಹೊರೆಯವರು ಆರೋಪಿಗೆ ಹಿಗ್ಗಾ ಮುಗ್ಗ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದೀಗ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.