ಪುಣೆ: ಅತಿಯಾಗಿ ಸೆಕ್ಸ್ ಬಯಸಿದ್ದಕ್ಕೆ 20 ವರ್ಷದ ಸಲಿಂಗಿ ತನ್ನ 46 ವರ್ಷದ ಸಹಭಾಗಿಯ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಇರಿತಕ್ಕೊಳಗಾದ ರಾಜೇಶ್ ವರ್ತಕ್ ಎಂಬಾತ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ಸೆಕ್ಸ್ ಬೇಕೆಂದು ಕೇಳಿದ್ದಕ್ಕೆ ತನ್ನ ಸಹಭಾಗಿ ತನಗೆ ಪ್ರಾಣಾಂತಿಕವಾಗಿ ಗಾಯಗೊಳಿಸಿದ್ದಾನೆ ಎಂದು ದೂರಿದ್ದಾನೆ.
ಉದ್ಯಮಿಯಾಗಿರುವ ರಾಜೇಶ್, ಹೋಟೆಲ್ ವೇಟರ್ ಜತೆ ಕಳೆದ ಎರಡು ವರ್ಷಗಳಿಂದ ಸಲಿಂಗ ಸಂಬಂಧ ಹೊಂದಿದ್ದ. ಇದೀಗ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.