ಮುಂಬೈ: ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಮಲಗಿದ್ದರೆ ಗಸ್ತು ತಿರುಗುವ ಪೊಲೀಸರು ಎಬ್ಬಿಸೋದು ಸಾಮಾನ್ಯ.
ಆದರೆ ಇದೇ ರೀತಿ ತನ್ನನ್ನು ಎಬ್ಬಿಸಿದ ಪೊಲೀಸರಿಗೆ ಆವಾಜ್ ಹಾಕಿದ ಅಸಾಮಿಯೊಬ್ಬ ಈಗ 1.7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮುಂಬೈನ ಕೋರ್ಟ್ ಆರೋಪಿಗೆ ಸಜಾ ನೀಡಿದೆ.
ಈತ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಲ್ಲಿ ಮಲಗಿದ್ದ ವ್ಯಕ್ತಿಯನ್ನು ಕರ್ತವ್ಯದಲ್ಲಿದ್ದ ಪೊಲೀಸರು ಎಬ್ಬಿಸಿದ್ದರು. ಇದರಿಂದ ಕೋಪಗೊಂಡ ಆತ ಈ ಸ್ಟೇಷನ್ ಏನು ನಿಮ್ಮಪ್ಪಂದಾ? ನಾನು ಎಲ್ಲಿಗೂ ಹೋಗಲ್ಲ. ನೀವು ಏನು ಬೇಕಾದ್ರೂ ಮಾಡಿಕೊಳ್ಳಿ ಎಂದು ಆವಾಜ್ ಹಾಕಿದ್ದಲ್ಲದೆ, ಪೊಲೀಸರನ್ನು ತಳ್ಳಿದ್ದ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಆರೋಪಿಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಒಂದು ವರ್ಷ ಏಳು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.