ಗುರುಗ್ರಾಮ್ ಹೂಡಾ ಸಿಟಿ ಸೆಂಟರ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ 29 ವರ್ಷ ವಯಸ್ಸಿನ ಯುವತಿಯ ಮಂದೆ ಹಸ್ತಮೈಥು ಮಾಡಿದ್ದಲ್ಲದೇ ವೀರ್ಯಾಣ ಸಿಡಿಸಿ ಪರಾರಿಯಾದ ಹೇಯ ಘಟನೆ ವರದಿಯಾಗಿದೆ.
ದೆಹಲಿ ಮೂಲದ ಮಹಿಳೆ ತನ್ನ ಗೆಳತಿಯನ್ನು ಭೇಟಿ ಮಾಡಿ ಮರಳಿ ಬರುವಾಗ ಮೆಟ್ರೋ ನಿಲ್ದಾಣದ ಮೊದಲ ಮಹಡಿಯಲ್ಲಿ ಇಂತಹ ಘಟನೆ ವಡೆದಿದೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಅಲ್ಲಿರುವ ಮಳಿಗೆಯಿಂದ ಹೊರಬಂದು ಎಸ್ಕಲೇಟರ್ನಿಂದ ಇಳಿಯುತ್ತಿರುವಾಗ ಯುವಕನೊಬ್ಬ ಆಕೆಯ ಹಿಂದೆ ಬಂದು ವೀರ್ಯಾಣು ಮಾಡಿದ್ದಾನೆ. ಆಕೆಗೆ ಆಘಾತವಾಗಿದೆ. ಆದರೆ ಹೆದರಿಕೆಯಿಲ್ಲದ ಯುವಕ ಆಕೆಯ ಮೇಲೆ ಮತ್ತೊಮ್ಮೆ ವೀರ್ಯಾಣು ಹಾಕಿದ್ದಲ್ಲದೇ ಅಸಭ್ಯ ಪದಗಳನ್ನು ಬಳಸಿದ್ದಾನೆ. ಕೊನೆಗೆ ನಾನು ಯುವಕನಿಗೆ ಕಪಾಳಮೋಕ್ಷ ಮಾಡಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಸಾರ್ವಜನಿಕವಾಗಿ ಯುವಕನ ಲೈಂಗಿಕ ಕಿರುಕುಳ ವರ್ತನೆ ವಿರುದ್ಧ ನಾನು ಕೂಗುತ್ತಿದ್ದರೂ ಯಾರೂ ನೆರವಿಗೆ ಬರಲಿಲ್ಲ. ಮತ್ತೊಂದು ಬಾರಿ ನನ್ನನ್ನು ಬಲವಂತವಾಗಿ ತಬ್ಬಿಕೊಂಡು ವೀರ್ಯಾಣು ಹಾಕಿ ಓಡಿ ಹೋದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಗುರುಗ್ರಾಮ್ ಪೊಲೀಸರಿಗೆ ಫೇಸ್ಬುಕ್ ಮೂಲಕ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಡಿಎಂಆರ್ಸಿಗೆ ದೂರು ನೀಡಿದಾಗ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಯುವತಿ ಮಾಹಿತಿ ನೀಡಿದ್ದಾಳೆ.