Publish Date: Mon, 19 Apr 2021 (10:03 IST)
Updated Date: Mon, 19 Apr 2021 (10:05 IST)
ರಾಜ್ ಕೋಟ್: ಕೊರೋನಾದಿಂದ ಬಳಲುತ್ತಿದ್ದ ಅಮ್ಮನ ಚಿಕಿತ್ಸೆಗಾಗಿ ಸುಮಾರು 3 ಲಕ್ಷ ರೂ. ಹಣ ಸಾಲ ಪಡೆದಿದ್ದ ಬೀದಿ ವ್ಯಾಪಾರಿಯೊಬ್ಬ ಆ ದುಡ್ಡು ಕಳೆದುಕೊಂಡ ಸಂಕಟದಲ್ಲಿದ್ದಾನೆ. ರಾಜ್ ಕೋಟ್ ನಲ್ಲಿ ಇಂತಹದ್ದೊಂದು ಮನಮಿಡಿಯುವ ಘಟನೆ ನಡೆದಿದೆ.
ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ತಳ್ಳು ಗಾಡಿ ವ್ಯಾಪಾರಿ ಅವರಿರವರ ಬಳಿ ಸಾಲ ಮಾಡಿ 2.95 ಲಕ್ಷ ರೂ. ಸಂಗ್ರಹಿಸಿದ್ದ. ಈ ದುಡ್ಡನ್ನು ತನ್ನ ತಳ್ಳು ಗಾಡಿಯಲ್ಲೇ ಇಟ್ಟುಕೊಂಡಿದ್ದ. ಆದರೆ ಸಂಜೆ ಮನೆಗೆ ಮರಳಿ ನೋಡಿದಾಗ ದುಡ್ಡು ಕಾಣೆಯಾಗಿರುವುದು ತಿಳಿದುಬಂದಿದೆ.
ಇದೀಗ ಆತ ಪೊಲೀಸರಿಗೆ ಕಳ್ಳತನದ ದೂರು ನೀಡಿದ್ದು, ತನ್ನ ಬಳಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.