ಮುಂಬೈ: ಆಧುನಿಕ ಜಗತ್ತಿನಲ್ಲಿ ಮೊಬೈಲ್ ಎಷ್ಟು ಉಪಯುಕ್ತವಾಗಿದೆಯೆಂದರೆ ಹಣಕಾಸಿ ವಹಿವಾಟುಗಳೆಲ್ಲವೂ ಫೋನ್ ಮೂಲಕವೇ ನಡೆದು ಹೋಗುತ್ತದೆ. ಆದರೆ ಇದರಿಂದ ಸಮಸ್ಯೆಗಳೂ ಆಗುವುದು ಇದೆ.
ಇತ್ತೀಚೆಗೆ ಮುಂಬೈ ವ್ಯಕ್ತಿಯೊಬ್ಬ ತನ್ನ ಫೋನ್ ರಿಪೇರಿಗೆಂದು ಕೊಟ್ಟು 2 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಫೋನ್ ಸ್ಪೀಕರ್ ಸಮಸ್ಯೆಯಾಗಿತ್ತೆಂದು ವ್ಯಕ್ತಿ ಅಂಗಡಿಯೊಂದರಲ್ಲಿ ರಿಪೇರಿಗೆ ಕೊಟ್ಟಿದ್ದ.
ಆದರೆ ಆ ಅಂಗಡಿಯಾತ ಆತನ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು 2 ಲಕ್ಷ ರೂ. ದೋಚಿದ್ದಾನೆ! ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.
-Edited by Rajesh Patil