Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೈದರಾಬಾದ್: ಎಷ್ಟು ಬುದ್ಧಿವಾದ ಹೇಳಿದರೂ ಅಕ್ರಮ ಸಂಬಂಧ ಮುಂದುವರಿಸಿದ್ದಕ್ಕೆ ಪತ್ನಿ ಮತ್ತು ಅಕೆಯ ಪ್ರಿಯಕರನನ್ನು ಪತಿ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
49 ವರ್ಷದ ಆರೋಪಿಯನ್ನು ಈ ಸಂಬಂಧ ಬಂಧಿಸಲಾಗಿದೆ. ಈತ ಹಲವು ಬಾರಿ ತನ್ನ ಪತ್ನಿ ಇನ್ನೊಬ್ಬನ ಜೊತೆ ಲಲ್ಲೆ ಹೊಡೆಯುತ್ತಿದ್ದುದನ್ನು ಕಣ್ಣಾರೆ ನೋಡಿದ್ದ. ಈ ಬಗ್ಗೆ ಬುದ್ಧಿವಾದ ಹೇಳಿದ್ದ. ಆದರೂ ಹೆಂಡತಿ ತನ್ನ ಚಾಳಿ ಮುಂದುವರಿಸಿದ್ದಳು.
ಕೊಲೆ ಮಾಡುವ ಉದ್ದೇಶದಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಊರ ಹೊರಗೆ ಕರೆದೊಯ್ದಿದ್ದ ಪತಿ ಮದ್ಯದ ಪಾರ್ಟಿ ನಡೆಸಿದ್ದ. ಪತಿ ಕಂಠಪೂರ್ತಿ ಕುಡಿಯುವಾಗ ಪತ್ನಿ ಆತನ ಎದುರೇ ಪ್ರಿಯಕರನ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದಳು. ಇದನ್ನು ನೋಡಿ ಆಕ್ರೋಶಗೊಂಡ ಪತಿ ಇಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಬಳಿಕ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.