Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗ್ವಾಲಿಯರ್: ಮಗನಿಗೆ ನಾಯಿ ಕಚ್ಚಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ನಾಯಿಯನ್ನೇ ಸಾಯಿಸಿ ಹಾಕಿದ ಘಟನೆ ಗ್ವಾಲಿಯರ್ ನಲ್ಲಿ ನಡೆದಿದೆ.
ಇದೀಗ ಕ್ರೂರತನ ಮೆರೆದ ವ್ಯಕ್ತಿಯ ಮೇಲೆ ಈಗ ಕೇಸ್ ದಾಖಲಾಗಿದೆ. ಒಂದು ತಿಂಗಳ ಹಿಂದೆ ಬೀದಿ ನಾಯಿ ಆರೋಪಿಯ ಮಗನಿಗೆ ಕಚ್ಚಿತ್ತು. ಇದೇ ಸಿಟ್ಟಿನಲ್ಲಿ ನಾಯಿಗೆ ಹೊಡೆದು ಹಿಂಸಿಸಿ ಕೊಂದು ಹಾಕಿದ್ದ.
ಈ ವಿಡಿಯೋ ವೈರಲ್ ಆಗಿತ್ತು. ಇದು ಪ್ರಾಣಿ ದಯಾ ಸಂಘದವರ ಗಮನಕ್ಕೂ ಬಂದಿತ್ತು. ಈ ಸಂಬಂಧ ಪ್ರಾಣಿ ದಯಾ ಸಂಘದವರು ಕೇಸ್ ದಾಖಲಿಸಿದ್ದಾರೆ. ಇದೀಗ ದೂರಿನನ್ವಯ ಆರೋಪಿ ಮೇಲೆ ಎಫ್ ಐಆರ್ ದಾಖಲಾಗಿದೆ.