ನವದೆಹಲಿ: ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಅನುಮತಿಯಿಲ್ಲದೇ ಗರ್ಭನಿರೋಧಕ ಕಾಂಡೋಮ್ ತೆಗೆದರೆ ಅದು ಅಪರಾಧವಾಗುತ್ತದೆ ಎಂದು ಕೆನಡಾದ ಕೋರ್ಟ್ ಒಂದು ತೀರ್ಪು ನೀಡಿದೆ.
ಎಚ್ ಐವಿ ಸೋಂಕಿತನೊಬ್ಬ ಸಂಭೋಗಿಸುವಾಗ ಸಂಗಾತಿಯ ಅನುಮತಿಯಿಲ್ಲದೇ ಕಾಂಡೋಮ್ ತೆಗೆದು ಆಕೆಗೂ ಸೋಂಕು ತಗುಲುವಂತೆ ಮಾಡಿದ್ದ. ಈ ಪ್ರಕರಣ ಕೆನಡಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇದರ ತೀರ್ಪು ನೀಡಿದ ಕೋರ್ಟ್ ಸಂಭೋಗಿಸುವುದು ಇಬ್ಬರ ಸಹಮತದಿಂದಲೇ ಆದರೂ ಲೈಂಗಿಕ ಸುರಕ್ಷತೆ ಸಾಧನವನ್ನು ಆಕೆಯ ಗಮನಕ್ಕೆ ತಾರದೇ ತೆಗೆದಿರುವುದು ಅಪರಾಧ ಎಂದು ಕೋರ್ಟ್ ತೀರ್ಪು ನೀಡಿದೆ.