Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ಕೆಲವು ದಿನಗಳ ಹಿಂದೆ ಪಿಟ್ ಬುಲ್ ನಾಯಿ ಸಾಕಿದ ಮಾಲಿಕಳನ್ನೇ ಕಚ್ಚಿ ಕೊಂದ ಘಟನೆ ಬಗ್ಗೆ ಕೇಳಿದ್ದೇವೆ. ಇದೀಗ ಅದೇ ತಳಿಯ ನಾಯಿ ಬಾಲಕನೊಬ್ಬನ ಮೇಲೆ ದಾಳಿ ಮಾಡಿದೆ ಘಟನೆ ವರದಿಯಾಗಿದೆ.
ಪಂಜಾಬ್ ನಲ್ಲಿ ಈ ಘಟನೆ ನಡೆದಿದ್ದು, ಪಿಟ್ ಬುಲ್ ನಾಯಿಯ ದಾಳಿಗೆ ಬಾಲಕ ಕಿವಿ ಕಳೆದುಕೊಂಡಿದ್ದಾನೆ. ತಂದೆಯ ಜೊತೆ ಮೋಟಾರ್ ಬೈಕ್ ನಲ್ಲಿ ಹೋಗಿ ಮನೆಗೆ ಮರಳಿದಾಗ ತನ್ನ ಮಾಲಿಕನ ಜೊತೆ ಕೂತಿದ್ದ ನಾಯಿ ಬಾಲಕನನ್ನು ನೋಡಿ ಬೊಗಳಲು ಶುರು ಮಾಡಿದೆ.
ಸೀದಾ ಬಾಲಕನ ಮೇಲೆ ದಾಳಿ ಮಾಡಲಾರಂಭಿಸಿದಾಗ ಮಾಲಿಕ ಮತ್ತು ಬಾಲಕನ ತಂದೆ ಸೇರಿಕೊಂಡು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕನ ಕಿವಿ ಭಾಗವನ್ನು ಕಚ್ಚಿ ಹಾಕಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.