Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
24 ವರ್ಷದ ಯುವತಿ ಕೆಲವು ದಿನಗಳ ಹಿಂದೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು. ಆಕೆಯದ್ದು ಆತ್ಮಹತ್ಯೆ ಎಂದು ಎಲ್ಲರನ್ನೂ ಪತಿ ನಂಬಿಸಿದ್ದ.
ಆದರೆ ಆಕೆಯ ದೇಹ ಮೇಲೆ ಗಾಯಗಳಿದ್ದಿದ್ದನ್ನು ಗುರುತಿಸಿದ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.