ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನರೇಂದ್ರ ಮೋದಿ ಸರಕಾರವನ್ನು ಸರಕು ಮತ್ತು ಸೇವೆಗಳ ತೆರಿಗೆಯನ್ನು "ಜನರಿಗೆ ಕಿರುಕುಳ ನೀಡಲು ಮತ್ತು ಆರ್ಥಿಕತೆಯನ್ನು ಮುಗಿಸಲು ಗ್ರೇಟ್ ಸೆಲಿಷ್ ಟ್ಯಾಕ್ಸ್" ಎಂದು ಹೇಳಿದ್ದಾರೆ.
ದೇಶದ ಜನತೆಗೆ ಕಿರುಕುಳ ನೀಡಲು ಮತ್ತು ಆರ್ಥಿಕತೆಯನ್ನು ಅಂತ್ಯಗೊಳಿಸಲು ಪ್ರಧಾನಿ ಮೋದಿ ಸರಕಾರ ಜಿಎಸ್‌ಟಿ( ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್) ಜಾರಿಗೊಳಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ನೋಟು ನಿಷೇಧ ದೇಶದ ಆರ್ಥಿಕತೆಗೆ ವಿನಾಶಕಾರಿಯಾಗಿದೆ. ಸಾಮಾಜಿಕ ಜಾಲ ತಾಣ ಬಳಕೆ ಮಾಡುವವರು ನವೆಂಬರ್ 8 ರಂದು ತಮ್ಮ ಪ್ರೊಫೈಲ್‌ನ್ನು ಕಪ್ಪು ಸ್ಕೈರ್ ಆಗಿ ಬದಲಿಸಿ ಕಪ್ಪು ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದ್ದಾರೆ.
ಜಿಎಸ್‌ಟಿ( ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್) ಜಾರಿಗೆ ತಂದಿರುವುದೇ ಜನತೆಗೆ ಕಿರುಕುಳ ನೀಡಲು,ನಿರುದ್ಯೋಗ ಹೆಚ್ಚಿಸಲು, ಉದ್ಯಮವನ್ನು ಸಂಕಷ್ಟಕ್ಕೀಡು ಮಾಡಲು, ದೇಶದ ಆರ್ಥಿಕತೆಯನ್ನು ಅಂತ್ಯಗೊಳಿಸುವುದಾಗಿದೆ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದಾದ್ಯಂತ ನವೆಂಬರ್ 8 ರಂದು 'ಕಪ್ಪು ದಿನ'ವನ್ನು ಆಚರಿಸುವುದಾಗಿ ತೃಣಮೂಲ ಕಾಂಗ್ರೆಸ್ ಘೋಷಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.