Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೂರದರ್ಶನ ಲೋಗೋ ಕೇಸರಿ ಬಣ್ಣ: ಮಮತಾ ಬ್ಯಾನರ್ಜಿ ಆಕ್ರೋಶ

DD News

Krishnaveni K

ನವದೆಹಲಿ , ಭಾನುವಾರ, 21 ಏಪ್ರಿಲ್ 2024 (09:02 IST)
Photo Courtesy: Twitter
ನವದೆಹಲಿ: ದೂರದರ್ಶನ ಸುದ್ದಿ ವಾಹಿನಿ ಲೋಗೋ ಬಣ್ಣ ಕೇಸರಿಯಾಗಿ ಬದಲಾಗಿದ್ದು, ಇದರ ವಿರುದ್ಧ ಈಗ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಬೆನ್ನಲ್ಲೇ ದೂರದರ್ಶನ ಲೋಗೋ ಬಣ್ಣ ಬದಲಾಯಿಸಿದ್ದು ಸರಿಯಲ್ಲ ಎಂಬುದು ಮಮತಾ ವಾದ. ಕೇಸರಿ ಬಿಜೆಪಿಯ ಸಾಂಕೇತಿಕ ಬಣ್ಣ. ಇದೀಗ ದೇಶದಾದ್ಯಂತ ಜನ ನೋಡುವ ಸರ್ಕಾರೀ ಸುದ್ದಿ ವಾಹಿನಿಯ ಲೋಗೋಗೆ ಕೇಸರಿ ಬಣ್ಣ ಹಾಕಿದ್ದು ಪರೋಕ್ಷವಾಗಿ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರಚಾರ ಮಾಡಿದಂತಾಗುತ್ತದೆ ಎಂಬುದು ಮಮತಾ ಆರೋಪ.

‘ದೂರದರ್ಶನ ಲೋಗೋ ಬಣ್ಣ ಕೇಸರಿಯಾಗಿದ್ದು ನನಗೆ ಶಾಕ್ ಆಗಿದೆ. ಇದು ಕಾನೂನು ಬಾಹಿರವಾಗಿ ಮಾಡಲಾಗಿದೆ. ಅದೂ ದೇಶದಲ್ಲಿ ಚುನಾವಣೆ ಜಾರಿಯಲ್ಲಿರುವಾಗ ಇಂತಹ ಬದಲಾವಣೆ ಮಾಡಿರುವುದು ತಪ್ಪು. ಕೇಸರೀಕರಣ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮಮತಾ ಆಗ್ರಹಿಸಿದ್ದಾರೆ.

ಒಂದೆಡೆ ಮಮತಾ ಈ ರೀತಿ ಆರೋಪಿಸಿದ್ದರೆ ಮತ್ತೊಂದೆಡೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಇದನ್ನು ಸಮರ್ಥಿಸಿಕೊಂಡಿದ್ದಾರೆ. ದೂರದರ್ಶನ ಲೋಗೋ ಬಣ್ಣವನ್ನು 1982 ರಲ್ಲೇ ಪರೀಕ್ಷಿಸಲಾಗಿತ್ತು. ಅದನ್ನು ಈಗ ಜಾರಿಗೆ ತರಲಾಗಿದೆ ಅಷ್ಟೇ. ಆವತ್ತು ಅದನ್ನು ನೀಲಿ ಬಣ್ಣಕ್ಕೆ ತಿರುಗಿಸಿದ್ದು ಯಾರು ಎಂದು ಪತ್ತೆ ಮಾಡಿ. ಇದರಲ್ಲಿ ಶಾಕ್ ಆಗುವಂತದ್ದು ಏನೂ ಇಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಆದರೆ ಸರ್ಕಾರೀ ಸ್ವಾಮ್ಯದ ದೂರದರ್ಶನ ಲೋಗೋ ವಿಚಾರ ಈಗ ವಿಪಕ್ಷಗಳ ಟೀಕೆಗೆ ಗುರಿಯಾಗುವ ಎಲ್ಲಾ ಸಾಧ‍್ಯತೆಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಶರವೇಗದ ಶತಕ: ಹೊಸ ದಾಖಲೆ ನಿರ್ಮಿಸಿದ ಸನ್‌ರೈಸರ್ಸ್‌