Select Your Language

Notifications

webdunia
webdunia
webdunia
webdunia

Video: ಪ್ರಧಾನಿ ಮೋದಿ ಒಬ್ಬ ಟೆರರಿಸ್ಟ್ ಎಂದು ನಾಲಿಗೆ ಹರಿಬಿಟ್ಟ ಮಲ್ಲಿಕಾರ್ಜುನ ಖರ್ಗೆ

Mallikarjun Kharge
Photo Credit: X
ಚೆನ್ನೈ: ತಮಿಳುನಾಡು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಕ್ಕೀಡಾಗಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಯನ್ನು ವಿಷ ಸರ್ಪಕ್ಕೆ ಹೋಲಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇದೀಗ ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಎಐಡಿಎಂಕೆ ಜೊತೆಗಿನ ಬಿಜೆಪಿ ಮೈತ್ರಿ ಬಗ್ಗೆ ಟೀಕಿಸುವ ಭರದಲ್ಲಿ ಖರ್ಗೆ ಈ ರೀತಿ ನಾಲಿಗೆ ಹರಿಬಿಟ್ಟಿದ್ದಾರೆ.

‘ಈ ಎಐಡಿಎಂಕೆಯ ಅಣ್ಣಾದುರೈ ಫೋಟೋ ಹಾಕಿಕೊಳ್ಳುವ ಜನ ಮೋದಿ ಜೊತೆ ಸಖ್ಯ ಹೇಗೆ ಬೆಳೆಸುತ್ತಾರೆ? ಮೋದಿ ಒಬ್ಬ ಭಯೋತ್ಪಾದಕ. ಅವರ ಪಕ್ಷ ಸಮಾನತೆ ಮತ್ತು ನ್ಯಾಯದ ಮೇಲೆ ನಂಬಿಕೆಯಿಟ್ಟಿಲ್ಲ. ಈ ಜನ ಅವರೊಂದಿಗೆ ಮೈತ್ರಿ ಮಾಡುತ್ತಿದ್ದಾರೆ. ಅಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

‘ತಮಿಳುನಾಡಿನ ಜನರಿಗೆ ಬಿಜೆಪಿ ಮುಂದೆ ತಲೆಬಾಗದ ಪಕ್ಷ ಬೇಕು, ಅದಕ್ಕೆ ಡಿಎಂಕೆಯ ಎಂಕೆ ಸ್ಟಾಲಿನ್ ಅವರೇ ಸೂಕ್ತ. ಎಐಡಿಎಂಕೆ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಅದು ಬಿಜೆಪಿ ಮುಂದೆ ಮಾತು ಕಳೆದುಕೊಂಡಿದೆ. ಈ ಪಕ್ಷ ತಮಿಳುನಾಡಿನ ಹಿತ ಕಾಪಾಡಲಾರದು’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.


pic.twitter.com/qymq7H54Z7

 

— IANS (@ians_india) April 21, 2026

Share this Story:

Follow Webdunia kannada

ಮುಂದಿನ ಸುದ್ದಿ

ಮೇಕೆ ದಾಟಿಗೆ ತಡೆ ಎಂಬ ಪ್ರಣಾಳಿಕೆ ಮಾಡಿದ ಡಿಎಂಕೆ ಪರವಾಗಿ ಕಾಂಗ್ರೆಸ್ ನಾಯಕ ಪ್ರಚಾರ: ನಾಚಿಕೆಯಾಗಬೇಕು ಎಂದ ಜೆಡಿಎಸ್