ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಚಟಕ್ಕೆ ಬಿದ್ದಿದ್ದ ಮಹಿಳೆಯೊಬ್ಬಳು ಯುವಕರಿಬ್ಬರ ಜೊತೆ ಅನೈತಿಕ ಸಂಬಂಧ ಮುಂದುವರಿಸಿದ್ದಳು ಎನ್ನಲಾಗಿದೆ.
ಮಹಿಳೆಯ ಲವ್ವಿ ಡವ್ವಿ ವಿಷಯವೇ ಇದೀಗ ಆಕೆಯನ್ನು ಜೈಲು ಪಾಲಾಗುವಂತೆ ಮಾಡಿದೆ.
ಅಟೆಂಡರ್ ಆಗಿದ್ದ ದೀಪಾ ಎಂಬುವಳು ನ್ಯಾಯವಾದಿ ನವೀನ್ ಹಾಗೂ ಅಟೆಂಡರ್ ನವೀನ್ ಎನ್ನೋ ಯುವಕರಿಬ್ಬರ ಜೊತೆ ಚಕ್ಕಂದ ಆಡುತ್ತಿದ್ದಳು ಎನ್ನಲಾಗಿದೆ.
ನ್ಯಾಯವಾದಿ ನವೀನ್ ಜೊತೆಗೆ ಸೇರಿಕೊಂಡು ಅಟೆಂಡರ್ ನವೀನ್ ನನ್ನು ಕೊಲೆ ಮಾಡಿಸಿದ್ದಾಳೆ.
ಪೊಲೀಸ್ ತನಿಖೆಯಲ್ಲಿ ದೀಪಾ ಹಾಗೂ ವಕೀಲ ನವೀನ್ ಮಾಡಿರುವ ಕೃತ್ಯ ಬಯಲಾಗಿದ್ದು, ಇಬ್ಬರೂ ಜೈಲು ಪಾಲಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.