ರಾಂಚಿ: ತಾನು ಕೊಡಿಸಿದ ಮೊಬೈಲ್ ಪ್ರೇಯಸಿ ವಾಪಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಪ್ರೇಮಿಗಳ ನಡುವೆ ಕಿತ್ತಾಟವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.
ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈಗ ಮನೆಯವರು ಯವತಿಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯಿಸಿದ್ದರು. ಈ ಕಾರಣಕ್ಕೆ ತಾನು ಉಡುಗೊರೆಯಾಗಿ ನೀಡಿದ್ದ ಮೊಬೈಲ್ ವಾಪಸ್ ನೀಡುವಂತೆ ಪ್ರಿಯಕರ ಕೇಳಿದ್ದ.
ಆದರೆ ಯುವತಿ ವಾಪಸ್ ನೀಡಲು ನಿರಾಕರಿಸಿದ್ದಳು. ಈ ವಿಚಾರವಾಗಿ ಜಗಳವಾಡಿದ ಬಳಿಕ ಇಬ್ಬರೂ ಫುಟ್ಬಾಲ್ ಪಂದ್ಯ ವೀಕ್ಷಿಸಲು ಹೋಗಿದ್ದರು. ಇದಾದ ಬಳಿಕ ಯುವತಿ ಮನೆಗೆ ಬಂದಿರಲಿಲ್ಲ. ವಿಚಾರಿಸಿದಾಗ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ ಪ್ರೇಮಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.