ಐದಾರು ವರ್ಷ ಲವ್ವಿ ಡವ್ವಿ ನಡೆಸಿದ ಹುಡುಗ ತನ್ನ ಪ್ರೇಯಸಿಗೆ ಕೈ ಕೊಟ್ಟಿದ್ದಾನೆ. ಇದರಿಂದ ಮನನೊಂದ ಯುವತಿ ಮಾಡಬಾರದ್ದನ್ನು ಮಾಡಿಕೊಂಡಿದ್ದಾಳೆ.
ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮದುವೆ ಹಂತಕ್ಕೂ ಹೋಗಿತ್ತು. ಮನೆ ಮಂದಿ ಮದುವೆ ಮಾತುಕತೆ ನಡೆಸಿದ್ದರು. ಆದರೆ ಹುಡುಗನ ಕಡೆಯವರು ಹೆಚ್ಚಿನ ವರದಕ್ಷಿಣೆ ಕೇಳಿದ್ದಾರೆ.
ಇದರಿಂದ ವರದಕ್ಷಿಣೆ ಕೊಡುವುದಕ್ಕೆ ಆಗದ ಹುಡುಗಿ ಮನೆಮಂದಿ ಮೌನಕ್ಕೆ ಜಾರಿದ್ಧಾರೆ.
ಅಷ್ಟರಲ್ಲಿ ಯುವತಿಯ ಜೊತೆಗೆ ಐದಾರು ವರ್ಷ ಲವ್ವಿ ನಡೆಸಿದ್ದ ಯುವಕನು ಪ್ರೇಯಸಿ ಇದ್ದ ಕಾಲೇಜಿನಲ್ಲಿಯೇ ಓದುತ್ತಿದ್ದ ಮತ್ತೊಬ್ಬ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.
ಇದರಿಂದ ಮನನೊಂದ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವುದಕ್ಕೂ ಮೊದಲು ಸ್ನೇಹಿತರಿಗೆ ಆಡಿಯೋ ರಿಕಾರ್ಡಿಂಗ್ ಕಳಿಸಿದ್ದಾಳೆ. ಕೇರಳದ ಆಲಪ್ಪುಳ ಪ್ರದೇಶದಲ್ಲಿ ಈ ಘಟನೆ ನಡೆದಿದೆ.