Publish Date: Thu, 12 Nov 2020 (08:42 IST)
Updated Date: Thu, 12 Nov 2020 (08:43 IST)
ಶಿರಸಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾಗೆ ಜನರನ್ನು ನೇಮಕ ಮಾಡುತ್ತಿದ್ದ ಉಗ್ರನನ್ನು ಶಿರಸಿಯಲ್ಲಿ ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದೆ.
ಸಯ್ಯದ್ ಎಂ ಇದ್ರಿಸ್ (28) ಎಂಬಾತ ಬಂಧಿತ. ಮಾರ್ಚ್ 18 ರಂದು ಈತನ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ಎಫ್ ಐಆರ್ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರ ಸಂಘಟನೆಗೆ ಸೇರಿಕೊಳ್ಳಲು ಆಕರ್ಷಿಸುವುದು, ಮನ ಒಲಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಈತನನ್ನು ಬಂಧಿಸಿ ಕೋಲ್ಕೊತ್ತಾಗೆ ಕರೆದೊಯ್ಯಲಿರುವ ಅಧಿಕಾರಿಗಳು ಅಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.