ತಮ್ಮ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದನ್ನು ನೋಡಲು ಆತ ಜೀವವನ್ನು ಉಳಿಸಿಕೊಂಡಿದ್ದನಿರಬೇಕು. ಉರಿ ಸೈನಾ ನೆಲೆಯಲ್ಲಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಯಕ್ ರಾಜಕಿಶೋರ್ ಸಿಂಗ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಕೇಳಿದ ಬಳಿಕ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಉಗ್ರರ ದಾಳಿಯಲ್ಲಿ ಹುತಾತ್ಮರಾದವರ ಸಂಖ್ಯೆ 19ಕ್ಕೇರಿದೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾನೆಲೆಯಲ್ಲಿ ಸೆಪ್ಟೆಂಬರ್ 18 ಭಾನುವಾರ ಮುಂಜಾನೆ 4 ಗಂಟೆ ಸುಮಾರಿ ದಾಳಿ ನಡೆಸಿದ್ದ ಉಗ್ರರು 18 ಸೈನಿಕರನ್ನು ಹತ್ಯೆಗೈದಿದ್ದರು. ತಮ್ಮೊಂದಿಗೆ ತಂದಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ 17 ಸೈನಿಕರು ಹುತಾತ್ಮರಾಗಿದ್ದರು. ಮತ್ತೊಬ್ಬ ಸೈನಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬಹುತೇಕ ಮಂದಿ ಕ್ಯಾಂಪ್‌ನಲ್ಲಿ ಬಿದ್ದ ಬೆಂಕಿಗೆ ಸಿಕ್ಕಿ ಹುತಾತ್ಮರಾಗಿದ್ದರು.
ಪಾಕ್ ಪ್ರಚೋದಿತ ಈ ದಾಳಿಗೆ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ. ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಘೋಷಿಸಿದ್ದರು. ಅಂತೆಯೇ ನಿನ್ನೆ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ ಸೈನಿಕರು 40 ಉಗ್ರರ ರುಂಡ ಚೆಂಡಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ