ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ದಾಳಿ ನಡೆಸಿದಲ್ಲಿ ಪರಮಾಣು ಬಾಂಬ್ಗಳಿಂದ ತಕ್ಕ ಉತ್ತರ ನೀಡುವುದಾಗಿ ಬೊಗಳೆ ಬಿಟ್ಟಿದ್ದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ಯಾಂಟ್ ಸಾರ್ವಜನಿಕವಾಗಿ ಕಳಚಿಬಿದ್ದು ನಗೆಪಾಟೀಲಿಗಿಡಾಗಿದೆ.
Iಪಾಕ್ ರಕ್ಷಣ ಸಚಿವ ಆಸಿಫ್ ಪ್ಯಾಂಟ್ ಕಳಚಿ ಬಿದ್ದಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಪ್ಯಾಂಟ್ ಸರಿಯಾಗಿ ಇಟ್ಟುಕೊಳ್ಳದ ಸಚಿವ ದೇಶವನ್ನು ಸರಿಯಾಗಿಟ್ಟುಕೊಂಡಾನೇ ಎನ್ನುವ ಲೇವಡಿಗಳು ಕೇಳಿಬರುತ್ತಿವೆ.
ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಮ್ಮ ಅತಿಥಿ ಮಿತ್ರನೊಂದಿಗೆ ಕಾರು ಹತ್ತುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ಸೇನಾ ಗಾರ್ಡ್ಗಳು ಮತ್ತು ಸರಕಾರಿ ಅಧಿಕಾರಿಗಳು ಸಚಿವ ಆಸಿಫ್ ಅವರ ಮುಂದೆ ನಿಂತ ಸಂದರ್ಭದಲ್ಲಿಯೇ ಅಕಸ್ಮಿಕವಾಗಿ ಪ್ಯಾಂಟ್ ಕಳಚಿ ಬಿದ್ದಿದೆ. ಕಳಚಿದ ಪ್ಯಾಂಟ್ನ್ನು ಆಸೀಫ್ ತಮ್ಮ ಕೈಯಗಳಿಂದ ಭದ್ರವಾಗಿ ಹಿಡಿದುಕೊಂಡ ವಿಡಿಯೋ ಟಾಂ ಟಾಂ ಎನ್ನುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ