Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಮನಗರ : ವಿರುದ್ಧ ಇತ್ತೀಚೆಗೆ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆರ್ಎಸ್ಎಸ್ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಆರ್ಎಸ್ಎಸ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಇವತ್ತು ಈ ಸರ್ಕಾರದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಆರ್ಎಸ್ಎಸ್ನ ಕಾರ್ಯಕರ್ತರನ್ನ ಸಿಂಡಿಕೇಟ್ ಮೆಂಬರ್ ಮಾಡಿಕೊಂಡಿದ್ದಾರೆ. ಕೆಲಸ ಆಗಲು ಒಂದು ಎರಡು ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದಾರೆ. 40 ವರ್ಷದ ಹಿಂದಿನ ಆರ್ಎಸ್ಎಸ್ ಬೇರೆ, ಈಗಿನ ಆರ್ಎಸ್ಎಸ್ ಬೇರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಅಡ್ವಾಣಿಯವರು ರಥಯಾತ್ರೆ: ಕಲೆಕ್ಟ್ ಆದ ಹಣ ಎಷ್ಟು, ಅದು ಎಲ್ಲಿದೆ, ಲೆಕ್ಕ ಯಾರು ಕೊಟ್ಟಿದ್ದಾರೆ
ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ದೇಶ ಒಡೆಯುವ ಹೇಳಿಕೆಗಳನ್ನು ಕೊಟ್ಟಿದ್ದಾರೆ. ದೇಶ ಏನು ಇವರಿಗೆ ಗುತ್ತಿಗೆ ಕೊಟ್ಟಿದ್ದೀರಾ? ಅಡ್ವಾಣಿಯವರು ರಥಯಾತ್ರೆ ಮಾಡಿದ್ದರು. ಆ ಸಂದರ್ಭದಲ್ಲಿ ಕಲೆಕ್ಟ್ ಆದ ಹಣ ಎಷ್ಟು, ಆ ಹಣ ಎಲ್ಲಿ ಇದೆ? ಅದರ ಬಗ್ಗೆ ಲೆಕ್ಕ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ರಾಮ ಮಂದಿರ ವಿಚಾರದಲ್ಲೂ ಲೋಪವಿದೆ. ರಾಮನ ಹೆಸರಲ್ಲೂ ಸಂಗ್ರಹವಾದ ಹಣದ ಲೆಕ್ಕ ಯಾರು ಇಟ್ಟಿದ್ದಾರೆ? ರಾಮನ ಹೆಸರಿನ ದುರುಪಯೋಗ ಕೂಡ ಆಗಿದೆ ಎಂದು ವಿಷಾದದ ದನಿಯಲ್ಲಿ ಹೇಳಿದರು.