ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಾಣಾಳಿಕೆ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಆಪ್ ಭದ್ರಕೋಟೆಯಾದ ದೆಹಲಿಯಲ್ಲಿ ಗೆಲುವು ಸಾಧಿಸಲು ಆಮ್ ಆದ್ಮಿ ಸರ್ಕಾರಕ್ಕಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ದೆಹಲಿಯಲ್ಲಿ ಈಗಾಗಲೆ ಆಮ್ ಆದ್ಮಿ ಸರ್ಕಾರ ಕುಡಿಯುವ ನೀರು, ವಿದ್ಯುತ್ ಸಬ್ಸಿಡಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ನೀಡಿದೆ. ಇದೀಗ ಬಿಜೆಪಿ ಇದನ್ನು ಮುಂದುವರಿಸುವ ಜೊತೆಗೆ ಇದರ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.’
ಇದಕ್ಕೆ ತಿರುಗೇಟು ನೀಡಿದ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್, ನಮಗಿಂತ ಐದು ಪಟ್ಟೇ? 200 ಯೂನಿಟ್ ಗೆ ಹೆಚ್ಚು ಪಟ್ಟು ಎಂದರೆ 1000 ಯೂನಿಟ್? 20 ಸಾವಿರ ಲೀಟರ್ ಉಚಿತ ನೀರಿಗೆ ಐದು ಪಟ್ಟು ಎಂದರೆ 1 ಲಕ್ಷ ಲೀಟರ್ ನೀರು ಉಚಿತವಾಗಿ ನೀಡಲಾಗುವುದೇ ಎಂದು ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಬಿಜೆಪಿ ದೆಹಲಿಯ ಜನರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.