ಬೆಂಗಳೂರು :ಭಾರೀ ಗೊಂದಲದಲ್ಲಿ ಸಿಲುಕಿದ ಫಿಲ್ಮ ಸಿಟಿ ನಿರ್ಮಾಣ ಕಾರ್ಯ ಇದೀಗ ರಾಮನಗರದ ಬದಲು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಫಿಲ್ಮ್ ಸಿಟಿ ನಿರ್ಮಾಣ ವಿಚಾರವಾಗಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರ ಫಿಲ್ಮ ಸಿಟಿಯನ್ನು ರಾಮನಗರದಲ್ಲಿ ಮಾಡುವ ನಿರ್ಧಾರ ಮಾಡಿತ್ತು.
ಆದರೆ ಇದೀಗ ಬಿಜೆಪಿ ಸರ್ಕಾರ ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ಮಾಡುವ ನಿರ್ಧಾರ ಮಾಡಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.