ಉತ್ತರ ಪ್ರದೇಶ: ಮಗಳ ಹುಟ್ಟುಹಬ್ಬಕ್ಕಾಗಿ ಮಾರುಕಟ್ಟೆಯಿಂದ ತಂದ ಬಲೂನ್ಗಳ ಮೇಲೆ 'I love Pakistan' ಎಂಬ ಬರಹ ಇರುವುದು ಪತ್ತೆಯಾಗಿದೆ.
ಉತ್ತರ ಪ್ರದೇಶದ ಕಾನ್ಪುರ್ದಲ್ಲಿ ಈ ಘಟನೆ ನಡೆದಿದೆ. ತಂದೆ ತಮ್ಮ ಮಗಳ ಹುಟ್ಟುಹಬ್ಬಕ್ಕಾಗಿ ಮಾರುಕಟ್ಟೆಯಿಂದ ಬಲೂನ್ ತಂದು ಮನೆಯಲ್ಲಿ ಅವುಗಳಿಗೆ ಗಾಳಿ ತುಂಬಲು ಮುಂದಾಗಿದ್ದಾರೆ. ಈ ವೇಳೆ ಅವುಗಳ ಮೇಲೆ 'I love Pakistan' ಎಂಬ ಬರಹ ಇರುವುದು ಕಂಡು ಬಂದಿದೆ. ಕೂಡಲೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿರುವ ಪೊಲೀಸರು ಬಲೂನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅವು ಎಲ್ಲಿಂದ ಬಂದವು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.