ಹೈದರಾಬಾದ್: ತೆಲಂಗಾಣ ವಿಧಾನಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಆರ್ ಎಸ್ 10 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಇಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ.
ತೆಲಂಗಾಣದಲ್ಲಿ ಈ ಬಾರಿ ಕೆಸಿಆರ್ ಆಡಳಿತ ಕೊನೆಗಾಣುವುದಕ್ಕೆ ಓರ್ವ ಕನ್ನಡಿಗನೂ ಕಾರಣ ಎಂಬುದನ್ನು ನೀವು ಅಚ್ಚರಿಯಾದರೂ ನಂಬಲೇ ಬೇಕು.
ತೆಲಂಗಾಣ ಚುನಾವಣೆಗೆ ಮುನ್ನ ಚುನಾವಣಾ ತಂತ್ರಗಾರಿಕೆ ನಿಪುಣ ಕನ್ನಡಿಗ ಸುನಿಲ್ ಮುಖ್ಯಮಂತ್ರಿ ಕೆಸಿಆರ್ ರನ್ನು ಭೇಟಿ ಮಾಡಿದ್ದರು. ತೆಲಂಗಾಣ ಚುನಾವಣೆಯಲ್ಲಿ ಕೆಸಿಆರ್ ಪಕ್ಷಕ್ಕೆ ಕಾರ್ಯತಂತ್ರ ರೂಪಿಸುವ ಬಗ್ಗೆ ಮಾತುಕತೆ ನಡೆಸಿದ್ದರು.
ಆದರೆ ಕೆಸಿಆರ್ ಗೆ ಸುನಿಲ್ ಸಲಹೆ ಇಷ್ಟವಾಗದೇ ಮಾತುಕತೆ ಮುರಿದುಬಿತ್ತು. ಬಳಿಕ ಸುನಿಲ್ ಕಾಂಗ್ರೆಸ್ ನ ಕಾರ್ಯತಂತ್ರದ ರೂವಾರಿಯಾದರು. ಇದೀಗ ಕಾಂಗ್ರೆಸ್ ತೆಲಂಗಾಣದಲ್ಲಿ ಸುನಿಲ್ ಸಲಹೆಯ ಪ್ರಕಾರ ಕಾರ್ಯತಂತ್ರ ರೂಪಿಸಿ ಗೆದ್ದಿದೆ. ಆದರೆ ಸುನಿಲ್ ತಿರಸ್ಕರಿಸಿದ್ದ ಕೆಸಿಆರ್ ಪಕ್ಷ ಸೋತಿದೆ.