ಜಾನಪದ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಜೋಗತಿ ಮಂಜಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಕೈಯಿಂದ ಪ್ರಶಸ್ತಿಯನ್ನು ಪಡೆಯುವ ಮೊದಲು ಜೋಗತಿ ಮಂಜಮ್ಮ ರಾಷ್ಟ್ರಪತಿಗೆ ದೃಷ್ಟಿ ತೆಗೆದಿದ್ದಾರೆ. ಜೋಗತಿ ಮಂಜಮ್ಮ ರಾಷ್ಟ್ರಪತಿ ಕೈಯಿಂದ ಪ್ರಶಸ್ತಿಯನ್ನು ಸ್ವೀಕರಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಜಾನಪದ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಇವರ ಕೊಡುಗೆಯನ್ನು ಗುರುತಿಸಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಜಮ್ಮ ಜೋಗತಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪಡೆಯುವ ಮುನ್ನಾ ರಾಷ್ಟ್ರಪತಿ ಬಳಿ ಹೋದ ಮಂಜಮ್ಮ ತನ್ನ ಸೀರೆ ಸರಗಿನಿಂದ ರಾಮನಾಥ್ ಕೋವಿಂದ್ಗೆ ದೃಷ್ಟಿ ತೆಗೆದಿದ್ದಾರೆ.
ರಾಮನಾಥ್ ಕೋವಿಂದ್ಗೆ ಮಂಜಮ್ಮ ಜೋಗತಿ ಅವರು ದೃಷ್ಟಿ ತೆಗೆಯುತ್ತಿದ್ದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರರು ಜೋರಾಗಿ ಚಪ್ಪಾಳೆ ತಟ್ಟಿದರು.