Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜ್ಞಾನವಾಪಿ ಮಸೀದಿ : ಇಂದು ಅಲಹಾಬಾದ್ ಹೈಕೋಟ್ನಲ್ಲಿ ವಿಚಾರಣೆ

ಜ್ಞಾನವಾಪಿ ಮಸೀದಿ : ಇಂದು ಅಲಹಾಬಾದ್ ಹೈಕೋಟ್ನಲ್ಲಿ ವಿಚಾರಣೆ
ಲಕ್ನೋ , ಗುರುವಾರ, 27 ಜುಲೈ 2023 (12:40 IST)
ಲಕ್ನೋ : ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸರ್ವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನಲ್ಲಿ ಗುರುವಾರ (ಇಂದು) ವಿಚಾರಣೆ ನಡೆಯಲಿದೆ. ಜುಲೈ 26ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಜುಲೈ 27ರಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ವಿಚಾರಣೆ ನಡೆಸಲಿದೆ.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ಕೈಗೊಳ್ಳಲು ವಾರಣಾಸಿ ಕೋರ್ಟ್ ಅನುಮತಿ ನೀಡಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ವಿವಾದಿತ ಶಿವಲಿಂಗದ ರಚನೆಯನ್ನು ಹೊರತುಪಡಿಸಿ ಸಂಕೀರ್ಣದಲ್ಲಿ ಕಾರ್ಬನ್ ಡೇಟಿಂಗ್ ನಡೆಸಲು ಅನುಮತಿ ನೀಡಲಾಗಿತ್ತು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವೈಜ್ಞಾನಿಕ ಸರ್ವೆ ಪ್ರಾರಂಭಿಸಿತ್ತು. ಇದೇ ತಿಂಗಳ ಜುಲೈ 24ರಂದು ಬೆಳಗ್ಗೆ 7 ಗಂಟೆಗೆ ಸರ್ವೆ ಆರಂಭಗೊಂಡಿತ್ತು. ಈ ನಡುವೆ ಮಸೀದಿ ಪರಿಶೀಲನೆಗೆ ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.

ಆ ನಂತರ ಜ್ಞಾನವ್ಯಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸುತ್ತಿರುವ ಸರ್ವೆ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ವಾರಣಾಸಿ ಜಿಲ್ಲಾ ನ್ಯಾಯಲಯದ ಆದೇಶದ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿತ್ತು. ಅಂಜುಮನ್ ಇಂಟೆಝಾಮಿಯಾ ಮಸೀದಿಯ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ತಾತ್ಕಾಲಿಕ ತಡೆ ನೀಡಿತ್ತು. ಅಲ್ಲದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿತ್ತು. 

ಕನಿಷ್ಠ ಒಂದು ವಾರದವರೆಗೆ ಸ್ಥಳದಲ್ಲಿ ಯಾವುದೇ ಉತ್ಖನನಗಳು ನಡೆಯುವುದಿಲ್ಲ. ಪ್ರಸ್ತುತ ಅಳತೆ ಪಡೆಯುವುದು, ಫೋಟೋ ತೆಗೆಯುವುದು ನಡೆಯುತ್ತಿದೆ. ಮುಂದಿನ ಸೋಮವಾರದವರೆಗೆ ಮಸೀದಿ ಜಾಗದಲ್ಲಿ ಯಾವುದೇ ಉತ್ಖನನವನ್ನು ನಡೆಸಲು ಯೋಜಿಸುವುದಿಲ್ಲ ಎಂಬ ಎಎಸ್ಐ ಹೇಳಿಕೆಯನ್ನು ನಾವು ದಾಖಲಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.  ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಅರ್ಜಿದಾರರಿಗೆ ಅವಕಾಶ ನೀಡುತ್ತೇವೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಅವಘಡ : 7 ಹಸುಗಳು ಸಜೀವ ದಹನ!