ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಕಂಡು ಬಂದಿರುವ ಶಿವಲಿಂಗ ರೂಪದ ರಚನೆಯ ವೈಜ್ಞಾನಿಕ ಸರ್ವೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ ನೀಡುವಂತೆ ಮುಸ್ಲಿಂ ಕಮಿಟಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದ್ದು, ಜುಲೈ 26ರವರೆಗೆ ಅಂದರೆ 2 ದಿನಗಳವರೆಗೆ ASI ಕಾರ್ಬನ್ ಡೇಟಿಂಗ್ ಸರ್ವೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಭಾರತೀಯ ಪುರಾತತ್ವ ಇಲಾಖೆಗೆ ತಾತ್ಕಾಲಿಕ ತಡೆ ನೀಡಿ ಮಧ್ಯಂತರ ಆದೇಶ ನೀಡಿದ್ದು, ಎರಡು ದಿನಗಳ ಬಳಿಕ ಸರ್ವೆ ಮಾಡಲು ಅನುಮತಿ ನೀಡಿದೆ. ಇನ್ನು, ಸುಪ್ರೀಂಕೋರ್ಟ್ ಸರ್ವೆ ವೇಳೆ ಮಸೀದಿಗೆ ಯಾವುದೇ ಹಾನಿ ಮಾಡಬಾರದು ಎಂದು ನಿರ್ದೇಶಿಸಿದೆ.