ಮುಂಬೈ : ರಿಲಯನ್ಸ್ ಜಿಯೋ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 5ಜಿ ಸೇವೆಯನ್ನು ದೀಪಾವಳಿ ಸಂದರ್ಭ ರೋಲ್ಔಟ್ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖ್ಯಸ್ಥ ಮುಖೇಶ್ ಅಂಬಾನಿ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರಲು ರಿಲಯನ್ಸ್ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿದರು.
ಮುಂದಿನ 2 ತಿಂಗಳಲ್ಲಿ ದೀಪಾವಳಿಯ ವೇಳೆಗೆ ಜಿಯೋ 5ಜಿ ಸೇವೆಗಳು ಪ್ರಾರಂಭವಾಗಲಿದೆ. ಮೊದಲಿಗೆ ದೇಶದ 4 ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ರೋಲ್ಔಟ್ ಪ್ರಾರಂಭವಾಗಿ, ಆಯ್ದ ಬಳಕೆದಾರರನ್ನು ತಲುಪಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.