ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಅವರ ಪುತ್ರಿ ತಾನು ಎಂದು ನ್ಯಾಯಾಲಯ ಮೆಟ್ಟಿಲೇರಿರುವ ಬೆಂಗಳೂರು ಮೂಲದ ಅಮೃತಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ.
ಜಯಲಲಿತಾ ಸ್ವಂತ ಮಗಳು ನಾನು ಎಂದು ಕೋರ್ಟ್ ಮೆಟ್ಟಿಲೇರಿರುವ ಅಮೃತಾ 1980 ರ ಪ್ರಶಸ್ತಿ ಸಮಾರಂಭದ ವಿಡಿಯೋವೊಂದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅಮೃತಾ ಅದೇ ಕಾರ್ಯಕ್ರಮ ನಡೆದ ಒಂದು ತಿಂಗಳ ನಂತರ ಹುಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಆದರೆ ಈ ವಿಡಿಯೋದಲ್ಲಿ ಜಯಲಲಿತಾ ಗರ್ಭಿಣಿಯಂತೆ ತೋರುತ್ತಿಲ್ಲ. ಮಾತ್ರವಲ್ಲದೆ, ಜಯಲಲಿತಾ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಗರ್ಭಿಣಿಯಾಗಿರಲಿಲ್ಲ. ಇದೆಲ್ಲಾ ಜಯಲಲಿತಾರ ಅಪಾರ ಆಸ್ತಿ ಕಬಳಿಸಲು ಮಾಡುತ್ತಿರುವ ನಾಟಕ ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.