ಚೆನ್ನೈ: ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರು ಇನ್ನೂ ಅವಕಾಶ ನೀಡದೇ ಇರುವುದು ಶಶಿಕಲಾ ನಟರಾಜನ್ ಅವರನ್ನು ಕೆರಳಿಸಿದೆ. ಹೀಗಾಗಿ ನಮ್ಮ ತಾಳ್ಮೆಗೂ ಮಿತಿಯಿದೆ. ಮಿತಿ ಮೀರಿದರೆ ಮುಂದೇನು ಮಾಡಬೇಕೋ ಅದನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಮಗೆ ಬಹುಮತವಿದೆ. ಹೀಗಾಗಿ ಸರ್ಕಾರ ರಚಿಸಲು ಅವಕಾಶ ನೀಡಬೇಕು. ಕೆಲವರು ಎಐಎಡಿಎಂಕೆಯ ಒಗ್ಗಟ್ಟು ಮುರಿಯುವುದಕ್ಕಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆ ಅದಕ್ಕೆಲ್ಲಾ ಅವಕಾಶ ನೀಡಲ್ಲ ಎಂದು ಚಿನ್ನಮ್ಮ ಗುಡುಗಿದ್ದಾರೆ.
ಒಬ್ಬೊಬ್ಬರೇ ಶಾಸಕರು ಪನ್ನೀರ್ ಸೆಲ್ವಂ ಕಡೆಗೆ ವಾಲುತ್ತಿರುವ ಹಿನ್ನಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಶಶಿಕಲಾ “ಅಮ್ಮ ಜಯಲಲಿತಾ ಪಕ್ಷವನ್ನು ಕಟ್ಟಿದರು. ಅವರ ಕನಸಿನಂತೆ ಈ ಪಕ್ಷವನ್ನು ಮುನ್ನಡೆಸುವ ಜವಾಬ್ಧಾರಿಯನ್ನು ನನಗೆ ಬಿಟ್ಟು ಹೋಗಿದ್ದಾರೆ. ನನಗೆ 1.5 ಕೋಟಿ ಜನರ ಬೆಂಬಲವಿದೆ. ಜನ ಬೆಂಬಲ ಮುಂದೆ ಯಾರೂ ನನಗೆ ಏನೂ ಮಾಡಲಾಗದು” ಎಂದು ಗುಡುಗಿದ್ದಾರೆ.
ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ನಡುವಿನ ಪದವಿ ಫೈಟ್ ತಾರಕಕ್ಕೇರಿದ್ದು, ಚಿನ್ನಮ್ಮ ತಮ್ಮ ಬೆಂಬಲಿಗರ ಸಂಖ್ಯೆ ಕಡಿಮೆಯಾಗುವ ಮೊದಲೇ ಖಂಡಿತಾ ಮುಂದಿನ ಹೆಜ್ಜೆ ಕೈಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಇಂದಿನ ದಿನ ಮಹತ್ವದ್ದಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ