Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನು ಮುಂದೆ ಐಓಎಸ್‍ನಲ್ಲೂ ’ಭೀಮ್’ ಆಪ್

ಇನ್ನು ಮುಂದೆ ಐಓಎಸ್‍ನಲ್ಲೂ ’ಭೀಮ್’ ಆಪ್
New Delhi , ಭಾನುವಾರ, 12 ಫೆಬ್ರವರಿ 2017 (06:00 IST)
ಅಧಿಕ ಮೌಲ್ಯದ ನೋಟು ರದ್ಧಾದ ಬಳಿಕ ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹೊರತಂದಿದೆ. ಇದರ ಭಾಗವಾಗಿ ಮೊಬೈಲ್ ಆಪ್ ಭೀಮ್ ಪ್ರಾರಂಭಿಸಿತು. ಆದರೆ ಇದುವರೆಗೆ ಇದು ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರ ಸೀಮಿತವಾಗಿತ್ತು. 
 
ಇದೀಗ ಐಓಎಸ್‌ನಲ್ಲೂ ಲಭಿಸಲಿದೆ. ಮೊಬೈಲ್ ಆಪ್ ಭೀಮ್ ಈಗ ಆಪೆಲ್ ಫೋನ್ ಬಳಕೆದಾರರಿಗೂ ಸಹ ಲಭ್ಯವಾಗಲಿವೆ, ಆಪೆಲ್ ಸ್ಟೋರ್‌ನಲ್ಲಿ ಭೀಮ್ ಆಪ್ ಲಭ್ಯ. ಅದನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದೆಂದು ನೀತಿ ಆಯೋಗ ಟ್ವಿಟ್ಟರ್‌ ಮೂಲಕ ತಿಳಿಸಿದೆ.
 
ಬಳಕೆದಾರರಿಗೆ ಸುಲಭವಾಗಿ, ಸುರಕ್ಷಿತವಾಗಿ ನಗದನ್ನು ವರ್ಗಾಯಿಸಲು ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ  ಮೋದಿ ಈ ಆಪ್ ಪ್ರಾರಂಭಿಸಿದ್ದರು. ಇದುವರೆಗೆ ಈ ಆಪನ್ನು ಬಹಳಷ್ಟು ಸಂಖ್ಯೆಯಲ್ಲಿ ಡೌನ್‌ಲೋಡ್ ಮಾಡಿಕೊಂಡು ವಹಿವಾಟು ನಡೆಸಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನಾಪ್‍ಡೀಲ್‌ನಲ್ಲಿ ಶೇ.30ರಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್