ನವದೆಹಲಿ : ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನವೆಂಬರ್ 8 ರಂದು ರಷ್ಯಾ ಪ್ರವಾಸವನ್ನು ಕೈಗೊಳ್ಳಲಿದ್ದು, ತಮ್ಮ ಸಹವರ್ತಿ ಸರ್ಗೆ ಲಾವ್ರೊವ್ ಅವರನ್ನು ಭೇಟಿಯಾಗಲಿದ್ದಾರೆ.
ಈ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ತಮ್ಮ ವಿರುದ್ಧ ದಾಳಿ ನಡೆಸಲು ಡರ್ಟಿ ಬಾಂಬ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆಧಾರರಹಿತವಾಗಿ ಆರೋಪಿಸಿದ್ದರು.
ಇದರ ಬೆನ್ನಲ್ಲೇ ಬುಧವಾರ ರಷ್ಯಾದಲ್ಲಿ ಪರಮಾಣು ಪಡೆಗಳು ತಾಲೀಮು ನಡೆಸಿರುವುದಾಗಿ ವರದಿಯಾಗಿದೆ. ಇದೀಗ ಜೈಶಂಕರ್ ಅವರ ಮಾಸ್ಕೋ ಭೇಟಿಯ ನಿರ್ಧಾರವನ್ನು ಈ ಎಲ್ಲಾ ಬೆಳವಣಿಗೆಳ ಬೆನ್ನಲ್ಲೇ ಮಾಡಲಾಗಿದೆ.