ನವದೆಹಲಿ : ಇನ್ಮುಂದೆ ನೀವು ತೆಗೆದುಕೊಳ್ಳುವ ಔಷಧಿ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ನಕಲಿ ಔಷಧ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಟ್ರ್ಯಾಕ್ ಮತ್ತು ಟ್ರೇಸ್ ಜಾರಿ ಮಾಡಲು ಮುಂದಾಗಿದೆ.
ಹೌದು. ನೀವು ತೆಗೆದುಕೊಳ್ಳುತ್ತಿರುವ ಔಷಧಿ ಸುರಕ್ಷಿತವಾಗಿದೆಯೋ ಇಲ್ಲವೋ? ಅದು ನಕಲಿಯೋ ಅಸಲಿಯೋ? ಎಂಬುದನ್ನು ತಿಳಿದುಕೊಳ್ಳುವ ಜೊತೆಗೆ ಕಳಪೆ ಹಾಗೂ ನಕಲಿ ಔಷಧ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಟ್ರ್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನ ಪರಿಚಯಿಸಲಿದೆ.
ಪ್ರಾರಂಭಿಕ ಹಂತದಲ್ಲಿ 300 ಔಷಧ ತಯಾರಕರು ತಮ್ಮ ಉತ್ಪನ್ನ ಔಷಧಗಳಿಗೆ ಕ್ಯೂಆರ್ಕೋಡ್ ಅನ್ನು ಬಳಸಬೇಕಾಗುತ್ತದೆ. ಇದರಿಂದ ಆಂಟಿಬಯೊಟಿಕ್ನ ಪ್ರತಿ ಸ್ಟ್ರಿಪ್ 100 ರೂ.ಗಳ ಎಂಆರ್ಪಿಗಿಂತ ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.