ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ತಗ್ಗುತ್ತಿದ್ದಂತೇ ರೂಪಾಂತರಿ ತಳಿ ಡೆಲ್ಟಾ ಪ್ಲಸ್ ಭೀತಿ ಹುಟ್ಟಿಸಿದೆ. ಮೂಲಗಳ ಪ್ರಕಾರ ಈಗಾಗಲೇ 50 ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ತಳಿಯ ಸೋಂಕಿತರು ದೇಶದಲ್ಲಿ ಪತ್ತೆಯಾಗಿದ್ದಾರೆ.
ಈಗಿನ ಪ್ರಕರಣಗಳನ್ನು ಗಮನಸಿದರೆ ಇದು ಯುವಕರಲ್ಲೇ ಹೆಚ್ಚು ಕಡಿಮೆ ಬಂದಿದೆ. ಹೀಗಾಗಿ ಇದುವೇ ಮೂರನೇ ಕೊರೋನಾ ಅಲೆಯ ಮುನ್ಸೂಚನೆ ಇರಬಹುದೇ ಎಂಬ ಆತಂಕ ತಜ್ಞರಲ್ಲಿದೆ.
ಆದರೆ ತಜ್ಞರು ಇನ್ನೂ ಡೆಲ್ಟಾ ಪ್ಲಸ್ ವೈರಸ್ ಎಷ್ಟು ಅಪಾಯಕಾರಿ ಎನ್ನುವುದರ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರಷ್ಟೇ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಈಗ ಕಂಡುಬಂದ ಸೋಂಕಿತರನ್ನೂ ಎಚ್ಚರಿಕೆಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.