Publish Date: Wed, 11 Nov 2026 (12:03 IST)
Updated Date: Wed, 11 Nov 2026 (12:08 IST)
ಕೋಲ್ಕತ್ತಾ ಮತ್ತು ಮಿಜೋರಾಂನ ಸೈರಾಂಗ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲು ಹಳಿ ತಪ್ಪುವ ಕೆಲವೇ ಕ್ಷಣಗಳ ಮುನ್ನ ಇಂಜಿನ್ ಒಳಗಿನಿಂದ ವೀಡಿಯೋ ಸೆರೆಹಿಡಿಯಲಾಗಿದೆ. ಈ ವೀಡಿಯೋದಲ್ಲಿ ರೈಲಿನ ಚಾಲಕ (ಲೊಕೋ ಪೈಲಟ್) ನಿಯಂತ್ರಣ ಕೊಠಡಿಗೆ ತೀರಾ ಆತಂಕದಿಂದ 'ಬ್ರೇಕ್ ಫೇಲ್' ಆಗಿರುವ ಕುರಿತು ಸಂದೇಶ ರವಾನಿಸುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತಿದೆ. ದುರಂತ ಸಂಭವಿಸುವ ಮುನ್ನ ಇಂಜಿನ್ ಕ್ಯಾಬಿನ್ನಲ್ಲಿದ್ದ ಆತಂಕದ ವಾತಾವರಣವನ್ನು ಈ ವೀಡಿಯೋ ಅನಾವರಣಗೊಳಿಸಿದೆ.
ಇಂಜಿನ್ ಒಳಗಿನ ಭೀಕರ ಕ್ಷಣಗಳು
ವೈರಲ್ ಆಗಿರುವ ವೀಡಿಯೋದಲ್ಲಿ, ವೇಗವಾಗಿ ಧಾವಿಸುತ್ತಿರುವ ರೈಲನ್ನು ನಿಯಂತ್ರಿಸಲು ಚಾಲಕ ಹಾಗೂ ಸಹ-ಚಾಲಕ ತೀವ್ರವಾಗಿ ಶ್ರಮಿಸುತ್ತಿರುವುದು ಕಂಡುಬರುತ್ತದೆ. ತುರ್ತು ಬ್ರೇಕ್ ಹಾಕಲು ಯತ್ನಿಸಿದರೂ ರೈಲು ನಿಲ್ಲದಿದ್ದಾಗ, ಚಾಲಕ ನಿಸ್ಸಹಾಯಕತೆಯಿಂದ ಬ್ರೇಕ್ ಕೆಲಸ ಮಾಡುತ್ತಿಲ್ಲ ಎಂದು ಆತಂಕದಿಂದ ಅಧಿಕಾರಿಗಳಿಗೆ ವರದಿ ಮಾಡುತ್ತಾನೆ. ಈ ಭೀಕರ ಕ್ಷಣಗಳ ಬೆನ್ನಲ್ಲೇ ರೈಲು ಹಳಿ ತಪ್ಪಿ ಭಾರಿ ದುರಂತ ಸಂಭವಿಸಿದೆ.
ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವೇ?
ಚಾಲಕ ಬ್ರೇಕ್ ಫೇಲ್ಯೂರ್ ಎಂದು ಸ್ಪಷ್ಟವಾಗಿ ಹೇಳಿರುವುದು ತಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಪ್ರಮುಖ ಕಾರಣವಿರಬಹುದು ಎಂಬ ಶಂಕೆಗೆ ಬಲ ನೀಡಿದೆ. ಈ ಸಿಸಿಟಿವಿ/ಕ್ಯಾಬಿನ್ ವೀಡಿಯೋ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ಉನ್ನತ ಮಟ್ಟದ ತನಿಖಾ ತಂಡವು ತನಿಖೆಯನ್ನು ಚುರುಕುಗೊಳಿಸಿದೆ.
ರೈಲಿನ ಬ್ರೇಕಿಂಗ್ ಸಿಸ್ಟಮ್ನಲ್ಲಿ ಸಮಸ್ಯೆ ಎದುರಾಯಿತೇ ಅಥವಾ ಸಿಗ್ನಲಿಂಗ್ ಹಾಗೂ ಹಳಿಯ ತಾಂತ್ರಿಕ ಲೋಪವಿತ್ತೇ ಎಂಬುದರ ಬಗ್ಗೆ ರೈಲ್ವೇ ಇಲಾಖೆ ಸಮಗ್ರ ತನಿಖೆ ನಡೆಸುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ