Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜೈಲಲ್ಲೇ ಕುಸಿದು ಬಿದ್ದ ಇಂದ್ರಾಣಿ ಮುಖರ್ಜಿ

ಜೈಲಲ್ಲೇ ಕುಸಿದು ಬಿದ್ದ ಇಂದ್ರಾಣಿ ಮುಖರ್ಜಿ
ನವದೆಹಲಿ , ಶನಿವಾರ, 2 ಜೂನ್ 2018 (09:08 IST)
ನವದೆಹಲಿ: ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಐಎನ್ ಎಕ್ಸ್ ಮೀಡಿಯಾ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ತೀವ್ರ ಅಸ್ವಸ್ಥರಾಗಿದ್ದಾರೆ.

ಜೈಲಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಹಿಂದೊಮ್ಮೆ ಇದೇ ರೀತಿ ಡ್ರಗ್ ಓವರ್ ಡೋಸ್ ಆಗಿ ಆಸ್ಪತ್ರೆ ಸೇರಿದ್ದರು. ಇದೀಗ ಮತ್ತೆ ಅಸ್ವಸ್ಥರಾಗಿದ್ದು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಲು ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ಆರೋಗ್ಯ ಸ್ಥಿತಿ ಗತಿ ಬಗ್ಗೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಕಳೆದ ಬಾರಿ ಖಿನ್ನತೆಗೆ ಸಂಬಂಧಿಸಿದ ಔಷಧ ತೆಗೆದುಕೊಂಡು ಆಕೆ ಅಸ್ವಸ್ಥರಾಗಿದ್ದರು. ಈಗಲೂ ಅದೇ ರೀತಿ ಆಗಿದೆಯೋ ಅಥವಾ ಬೇರೆ ಯಾವುದಾದರೂ ಕಾರಣದಿಂದ ಈ ರೀತಿ ಆಗಿದೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2001 ರಿಂದ ರಜೆಯೇ ಮಾಡಿಲ್ವಂತೆ ಪ್ರಧಾನಿ ಮೋದಿ!