Webdunia - Bharat's app for daily news and videos

Install App

ಸ್ವಚ್ಛ ನಗರಗಳ ಸಮೀಕ್ಷೆ: ಇಂಧೋರ್`ಗೆ ಮೊದಲ ಸ್ಥಾನ, ಮೈಸೂರಿಗೆ 5ನೇ ಸ್ಥಾನ

Webdunia
ಗುರುವಾರ, 4 ಮೇ 2017 (13:36 IST)
ದೇಶದ ಸ್ವಚ್ಛ ನಗರಗಳ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂಧೋರ್ ನಗರ ಮೊದಲ ಸ್ಥಾನ ಗಳಿಸಿದೆ. ಇದೇ ರಾಜ್ಯದ ಭೋಪಾಲ್ ಸಹ 2ನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಗುಜರಾತ್`ನ ಸೂರತ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿವೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಮೈಸೂರು 5ನೇ ಸ್ಥಾನಕ್ಕೆ ಕುಸಿದಿದೆ.

ಉತ್ತರಪ್ರದೇಶದ ಗೊಂಡಾ 434ನೇ ಸ್ಥಾನ ಗಳಿಸಿದ್ದು, ದೇಶದ ಡರ್ಟಿ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಈ ಪಟ್ಟಿಯನ್ನ ಘೋಷಿಸಿದ್ದಾರೆ.

ನಗರದ ಕಸ ನಿರ್ವಹಣೆ, ಶೌಚಾಲಯಗಳ ಅಭಿವೃದ್ಧಿ, ಶಿಕ್ಷಣ, ಕಟ್ಟಡಗಳು, ಪ್ರತೀ ನಗರದಲ್ಲಿ 18 ಲಕ್ಷ ಜನರ ಅಭಿಪ್ರಾಯ, ಜೀವನ ಪ್ರಕ್ರಿಯೆ ಇವೇ ಮುಂತಾದ ಮಾನದಂಡಗಳನ್ನ ಅನುಸರಿಸಿ ಸ್ವಚ್ಛ ನಗರಗಳ ಪಟ್ಟಿ ಸಿದ್ಧಪಡಿಸಕಾಗಿದೆ. ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಂಜಾಬ್`ನಲ್ಲಿ ಟಾಪ್ 4 ಗಲೀಜು ನಗರಗಳಿವೆ. ಕತ್ತೀಸ್ ಗಡ, ಜಾರ್ಖಂಡ್`ಗಳಲ್ಲಿ ಸ್ವಚ್ಛತೆ ಪ್ರಮಾಣ ಉತ್ತಮಗೊಂಡಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಸ್ವಚ್ಛಭಾರತದ ಅಭಿಯಾನದ ಅಂಗವಾಗಿ ಈ ಸಮೀಕ್ಷೆ ನಡೆಸಲಾಗುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments