ಗೋವಾದ ಪ್ರಸಿದ್ಧ ಬೀಚ್`ಗಳಲ್ಲಿ ಮದ್ಯದ ಬಾಟಲಿಗಳನ್ನ ಎಸೆದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಉತ್ತರ ಗೋವಾದ ಪೊಲೀಸರು ಬೀಚ್, ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ.
ಬೀಚ್`ಗೆ ಕಾಲ ಕಳೆಯಲು ಬರುವ ಪ್ರವಾಸಿಗರು ಒಡೆದ ಬಾಟಲುಗಳನ್ನ ಎಸೆದು ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಇದರ ಜೊತೆಗೆ, ಈ ಬಗ್ಗೆ ಪರಿಶೀಲನೆ ನಡೆಸಿದಾಗ ತೀರದಲ್ಲಿ ರಾಶಿ ರಾಶಿ ಬಾಟಲ್`ಗಳು ಪತ್ತೆಯಾಗಿದ್ದು, ಕಠಿಣ ಕ್ರಮಕ್ಕೆ ಆದೇಶಿಸಿರುವುದಾಗಿ ಎಸ್`ಪಿ ಕಾರ್ತಿಕೆ ಕಶ್ಯಪ್ ಹೇಳಿದ್ದಾರೆ.
ಬಹಿರಂಗ ಮದ್ಯಪಾನದಿಂದ ಹಲವು ಪ್ರವಾಸಿಗರು ಮುಜುಗರ ಅನುಭವಿಸುತ್ತಿದ್ದಾರೆ. ಈ ಆದೇಶ ಜಾರಿಯಾದ ಬಳಿಕ ಯಾರಾದರೂ ಬಹಿರಂಗವಾಗಿ ಮದ್ಯ ಸೇವಿಸಿದ್ದು ಕಂಡುಬಂದರೆ ಸೆಕ್ಷನ್ 34ರ ಅನ್ವಯ ಕೇಸ್ ದಾಖಲಿಸಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ