ಮುಂಬೈ : ತನ್ನ ವ್ಯಾಪ್ತಿಯನ್ನು ಯುರೋಪ್ಗೆ ವಿಸ್ತರಿಸಲು ಟರ್ಕಿಶ್ ಏರ್ಲೈನ್ಸ್ ಸಹಭಾಗಿತ್ವದಲ್ಲಿ 500 ವಿಮಾನಗಳನ್ನ ಖರೀದಿಸಲು ಇಂಡಿಗೋ ಏರ್ಲೈನ್ಸ್ ಆರ್ಡರ್ ಮಾಡಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಇದು ಭಾರತ-ಇಸ್ತಾಂಬುಲ್ ಮತ್ತು ಯುರೋಪ್ ನಡುವೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಏರ್ಲೈನ್ಸ್ ಅಧಿಕಾರಿಗಳ ಪ್ರಕಾರ, ಇಂಡಿಗೋ ಯುರೋಪಿಯನ್ ದೈತ್ಯ ಏರ್ಬಸ್ ಹಾಗೂ ಯುಎಸ್ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಗೆ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಮಲ್ಹೋತ್ರಾ, ಇಂಡಿಗೋ ಪ್ರಸ್ತುತ 1,800 ವಿಮಾನಗಳನ್ನು ಹಾರಿಸುತ್ತಿದೆ. ಅವುಗಳಲ್ಲಿ 10 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿವೆ. ವಿಸ್ತರಣಾ ಯೋಜನೆಗಾಗಿ ಇಂಡಿಗೋ ಇನ್ನೂ 500 ವಿಮಾನಗಳ ಖರೀದಿಗೆ ಆರ್ಡರ್ ಮಾಡಿದೆ. ಅದಕ್ಕಾಗಿ ಟರ್ಕಿಏರ್ಲೈನ್ನೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.