ನವದೆಹಲಿ : ಶಸ್ತ್ರಾಸ್ತ್ರಗಳ ಆಮದಿನಲ್ಲಿ ಭಾರತ ಈಗಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಈ ವರದಿ ಪ್ರಕಟಿಸಿದೆ. 2013-17ರ ಅವಧಿಗೆ ಹೋಲಿಸಿದರೆ 2018–22ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.11ರಷ್ಟು ಇಳಿದಿದೆ ಎ೦ದು ತಿಳಿಸಿದೆ.
ಆಮದು: ಯಾವ ದೇಶದ ಪಾಲು ಎಷ್ಟು?
ಭಾರತ ಶೇ.11, ಸೌದಿ ಅರೇಬಿಯಾ ಶೇ.6, ಕತಾರ್ ಶೇ.6.4, ಆಸ್ಟ್ರೇಲಿಯಾ ಶೇ.4.7, ಚೀನಾ ಶೇ.4.6, ಈಜಿಪ್ಟ್ ಶೇ.4.5, ದಕ್ಷಿಣ ಕೊರಿಯಾ ಶೇ.3.7, ಪಾಕಿಸ್ತಾನ ಶೇ.3.7, ಜಪಾನ್ ಶೇ.3.5, ಅಮೆರಿಕ ಶೇ.2.7, ಇತರೇ ಶೇ.45 ರಷ್ಟು ಪಾಲನ್ನು ಹೊಂದಿದೆ.
ರಫ್ತು: ಯಾವ ದೇಶದ ಪಾಲು ಎಷ್ಟು?
ಅಮೆರಿಕ ಶೇ.40, ರಷ್ಯಾ ಶೇ.16, ಫ್ರಾನ್ಸ್ ಶೇ.11, ಚೀನಾ ಶೇ.5.2, ಜರ್ಮನಿ ಶೇ.4.2, ಇಟಲಿ ಶೇ.3.8, ಇಂಗ್ಲೆಂಡ್ ಶೇ.3.2, ಸ್ಪೇನ್ ಶೇ.2.6, ದಕ್ಷಿಣ ಕೊರಿಯಾ ಶೇ.2.4, ಇಸ್ರೇಲ್ ಶೇ.2.3, ಇತರೇ ಶೇ.9.4 ಪಾಲನ್ನು ಹೊಂದಿದೆ.