ನವದೆಹಲಿ: ಭಾರತ ಮತ್ತು ಚೀನಾ ಸೇನೆ ಡೋಕ್ಲಾಂ ಗಡಿಯಲ್ಲಿ ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವಾಗುತ್ತಿದೆ ಎಂಬ ವರದಿಗಳು ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ಭಾರತೀಯ ಸೇನೆಯ ಉತ್ತರವೇನು ಗೊತ್ತಾ?
ಉಭಯ ದೇಶಗಳೂ ಇನ್ನೇನು ಕೈ ಮಿಲಾಯಿಸಿಯೇ ಬಿಟ್ಟವು ಎನ್ನುವಷ್ಟು ಉದ್ವಿಗ್ನತೆಯಿದೆ. ಉಭಯ ದೇಶಗಳ ನಾಯಕರೂ ಪರಸ್ಪರ ತೊಡೆ ತಟ್ಟಿಕೊಳ್ಳುತ್ತಿದ್ದಾರೆ. ಭಾರತೀಯ ಸೇನೆ ಡೋಕ್ಲಾಂ ಗಡಿಯಲ್ಲಿರುವ ಸಾರ್ವಜನಿಕರನ್ನು ಸ್ಥಳಾಂತರಿಸಲು ಸೂಚಿಸಿದೆ. ಇನ್ನೇನು ಯುದ್ಧ ಆಗಿಯೇ ಬಿಡುತ್ತದೆ ಎಂದು ಸುದ್ದಿಗಳು ಹಬ್ಬಿವೆ.
ಆದರೆ ಭಾರತೀಯ ಸೇನೆ ಇದನ್ನು ನಿರಾಕರಿಸಿದೆ. ಗಡಿಯಿಂದ ಸಾರ್ವಜನಿಕರನ್ನು ಸ್ಥಳಾಂತರಿಸಿಲ್ಲ. ಇಲ್ಲಿ ಚೀನಾ ಸೇನೆ ಭಾರೀ ಶಸ್ತ್ರಾಸ್ತ್ರಗಳನ್ನು ಗುಡ್ಡೆಹಾಕಿದೆ ಎಂದೆಲ್ಲಾ ಕಲ್ಪನೆಯಷ್ಟೇ. ಎಲ್ಲವನ್ನೂ ಮಾತುಕತೆ ಮೂಲಕ ಪರಿಹರಿಸಬಹುದೆಂದು ಭಾರತ ಮತ್ತೆ ಮತ್ತೆ ಹೇಳುತ್ತಿದೆ.
ಆದರೆ ಅತ್ತ ಚೀನಾ ಮಾತ್ರ ತಾನು ಯಾವತ್ತಿಗೂ ತನ್ನ ಸಾರ್ವಭೌಮತ್ವದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತ ಕೂಡಲೇ ತನ್ನ ಸೇನಾ ಶಸ್ತ್ರಾಸ್ತ್ರಗಳನ್ನು ಗಡಿಯಿಂದ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದೆ.