ನವದೆಹಲಿ: ಭಾರತದ ಉಪರಾಷ್ಟ್ರಪತಿಯಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿ ಇದೀಗ ನಿರ್ಗಮಿತವಾಗುತ್ತಿರುವ ಹಮೀದ್ ಅನ್ಸಾರಿ ಕೊನೆ ಗಳಿಗೆಯಲ್ಲಿ ಹೇಳಿಕೆಯೊಂದನ್ನು ನೀಡಿ ವೃಥಾ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶದಲ್ಲಿ ಸದ್ಯಕ್ಕೆ ಗೋ ರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂಬ ಭಾವನೆ ಮೂಡುತ್ತಿದೆ ಎಂದಿದ್ದರು.
ಈ ಹೇಳಿಕೆಗೆ ಇದೀಗ ಬಿಜೆಪಿ ಸೇರಿದಂತೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿದೆ. ‘ಭಾರತದಷ್ಟು ಸುರಕ್ಷಿತ ಸ್ಥಳ ಮುಸ್ಲಿಮರಿಗೆ ಬೇರೊಂದಿಲ್ಲ. ಹಾಗೆಯೇ ಹಿಂದೂಗಳಷ್ಟು ಒಳ್ಳೆಯ ಸ್ನೇಹಿತರೂ ಮುಸ್ಲಿಮರಿಗಿಲ್ಲ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. 10 ವರ್ಷಗಳ ಕಾಲ ಹಿಂದೂ ಬಹುಸಂಖ್ಯಾತರಿರುವ ದೇಶವೊಂದು ಮುಸ್ಲಿಮರಾದ ನಿಮ್ಮನ್ನು ರಾಷ್ಟ್ರಪತಿಯಾಗಿ ಇರಿಸಿಕೊಂಡಿದೆ ಎಂದರೆ ಅದಕ್ಕಿಂತ ದೊಡ್ಡ ಗೌರವ ನಿಮಗೆ ಬೇಕೇ ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಪ್ರಶ್ನಿಸಿದ್ದಾರೆ.